Welcome to Jnanarathna Education and Charitable Trust ®

School Day on 12th Feb

ಜ್ಞಾನರತ್ನ ಎಜುಕೇಶನ್ ಅಂಡ್ ಚಾರಿಟೇಬಲ್ ಟ್ರಸ್ಟ್(ರಿ)* ನಿಡ್ಡೋಡಿಯ ಶ್ರೀ ದುರ್ಗಾದೇವಿ ಆಂಗ್ಲ ಮಾಧ್ಯಮ ಶಾಲೆ, ಇದರ ಶಾಲಾ ವಾರ್ಷಿಕೋತ್ಸವವನ್ನು ತಾರೀಕು 12 ಫೆಬ್ರವರಿ 2022 ರಂದು ಆಚರಿಸಲಾಯಿತು. ಪೂರ್ವನ್ಹ ಹನ್ನೊಂದು ಗಂಟೆಗೆ ಸರಿಯಾಗಿ ದೀಪ ಬೆಳಗಿಸುವುದರ ಮೂಲಕ ನಮ್ಮ ಸಂಸ್ಥೆಯ ಅಧ್ಯಕ್ಷರಾದ ಶ್ರೀಯುತ ಭಾಸ್ಕರ್ ದೇವಸ್ಯ ರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಕಾರ್ಯಕ್ರಮದಲ್ಲಿ ಕಲ್ಲಮುಂಡ್ಕೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಕೇಶವ ಸಂಗಮ್, ನಮ್ಮ ಸಂಸ್ಥೆಯ ಕಾರ್ಯದರ್ಶಿ ಶ್ರೀಮತಿ ಸಂಗೀತ ಭಾಸ್ಕರ ದೇವಸ್ಯ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ದಿನೇಶ್ ಶೆಟ್ಟಿ, ನಮ್ಮ ಸಂಸ್ಥೆಯ ಆಡಳಿತಾಧಿಕಾರಿಯಾದ ಶ್ರೀ ಕೆ ರಾಘವೇಂದ್ರ ಭಟ್ ಹಾಗೂ ಶಾಲಾ ನಾಯಕಿ ವೈಶಾಲಿ ಬಿ ಗೌಡ ಉಪಸ್ಥಿತರಿದ್ದರು. ಶಾಲಾ ಮಕ್ಕಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮದ ಮೂಲಕ ಪ್ರೇಕ್ಷಕರನ್ನು ಮನರಂಜಿಸಿದರು. ಕಾರ್ಯಕ್ರಮದ ಅಂತ್ಯದಲ್ಲಿ ಶಾಲಾ ಮಕ್ಕಳಿಗೆ ಆಯೋಜಿಸಲಾದ ಕಸದಿಂದ ರಸ ಸ್ಪರ್ಧೆಯ ಬಹುಮಾನವನ್ನು ಹಾಗೂ ಕಲಿಕೆಯಲ್ಲಿ ಪ್ರತಿಭಾನ್ವಿತ ಮಕ್ಕಳನ್ನು ಗೌರವಿಸಲಾಯಿತು. ಕೈಗಾರಿಕ ತರಬೇತಿ ಸಂಸ್ಥೆಯ ಪ್ರಾಂಶುಪಾಲೆ ಶ್ರೀಮತಿ ಅನುರಾಧಾ ಸಾಲಿಯಾನ್ ಶಾಲಾ ಪ್ರಾಂಶುಪಾಲೆ ಶ್ರೀಮತಿ ದಿವ್ಯಾ ಎಸ್ ನಾಯಕ್ ಹಾಗೂ ಶಿಕ್ಷಕ ಶಿಕ್ಷಕೇತರ ವೃಂದದವರು ಕಾರ್ಯಕ್ರಮದಲ್ಲಿ ಹಾಜರಿದ್ದರು.

 

A Unit of Jnanarathna Education and Charitable Trust ® Niddodi, Sri Durga Devi English medium school. celebrated School Day on 12th  Feb 2022. Programme was Inaugurated at 11.00 AM through lighting the lamp by Our president Sri Bhaskar Devasya,  Kallamundkur Grama panchayath President Sri Keshav Sangam, Secretary of trust Smt. Sangeetha Bhaskar Devasya,  School PTA president Sri. Dinesh Shetty, School Admin Maneger Sri K Raghavendra Bhat and SPL Miss. Vaishali B Gowda  have witnessed the programme. Cultural Programme was held by our school students and at last Prizes were distributed to the winners of “BEST OUT OF WASTE” competition and class toppers. ITI Principal Smt.Anuradha Salian, School Principal Smt. Divya S Nayak and All Teaching and Non-Teaching Faculties witnessed the programme by their presence.

 

Leave a Reply